ಇನ್ಸ್‍ಬ್ರುಕ್
ಆಸ್ಟ್ರಿಯದ ಟೈರೋನ್ ಪ್ರಾಂತ್ಯದ ರಾಜಧಾನಿ. ಮ್ಯೂನಿಚ್‍ನಿಂದ 60ಮೈ. ದೂರದಲ್ಲಿದೆ. ಜನಸಂಖ್ಯೆ ಸು. 2,00,000. ಮಧ್ಯಕಾಲದಲ್ಲಿ ಸಾಮ್ರಾಜ್ಯದ ಕೇಂದ್ರವಾಗಿತ್ತು. ಐತಿಹಾಸಿಕ ಕಟ್ಟಡಗಳು, ಸುಂದರ ಚರ್ಚುಗಳು, ಅರಮನೆ-ಮೊದಲಾದುವು ಇವೆ. ಒಂದು ಪ್ರಾಚೀನ ವಿಶ್ವವಿದ್ಯಾನಿಲಯವೂ ಇದೆ. ಇನ್ಸ್ ಕಣಿವೆಯಲ್ಲಿದ್ದು ಗಿರಿ ಕಂದರಗಳಿಂದ ಸುತ್ತುವರಿದಿರುವುದರಿಂದ ಪ್ರವಾಸಿಗರಿಗೆ ವಿಶೇಷ ಆಕರ್ಷಣೀಯ ತಾಣವಾಗಿದೆ. ವ್ಯಾಪಾರ ಮತ್ತು ಔದ್ಯೋಗಿಕ ಕೇಂದ್ರ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ